ಪುನೀತ್ ತೂಕ ಏರ್ತಿದೆ: ದಾಡಿ ದಟ್ಟವಾಗ್ತಿದೆ- ರಹಸ್ಯ ಇಲ್ಲಿದೆ | FIlmibeat Kannada

2017-11-28 441

ನಗುಮುಖ, ಮುಗ್ಧತೆಯ ಮಾತು, ಕ್ಲೀನ್ ಫೇಸು ಇದು ಸದಾ ಅಪ್ಪು ಕಾಣಿಸ್ಕೊಳ್ಳುವ ಶೈಲಿ. ಆಕಸ್ಮಾತ್ ಅಪ್ಪು ಮುಖದಲ್ಲಿ ಸ್ವಲ್ಪ ಬದಲಾವಣೆಯಾದರೂ ಕ್ಯಾಮೆರಾದಲ್ಲಿ ಸೆರೆಯಾಗುತ್ತದೆ. ಇದೀಗ ಪುನೀತ್ ರಾಜ್‍ಕುಮಾರ್ ಮುಖದಲ್ಲಿ ಬದಲಾವಣೆಯಾಗಿದೆ. ಬಾಡಿ ಚೇಂಜ್ ಆಗಿದೆ. ಕ್ಲೀನ್ ಶೇವಿಂಗ್ ನಲ್ಲಿರುತ್ತಿದ್ದ ಅಪ್ಪು ಇದೀಗ ಗಡ್ಡದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಣ್ಣಕ್ಕೆ ಸಿಕ್ಸ್ ಪ್ಯಾಕ್ ನಲ್ಲಿ ಮಿಂಚುತ್ತಿದ್ದ ಅಪ್ಪು ಕೊಂಚ ದಪ್ಪಗಾಗಿದ್ದಾರೆ.ಅಪ್ಪು ಎಂದರೆ ಕಣ್ಣ ಮುಂದೆ ಬರೋದು ಒಬ್ಬ ಪಕ್ಕಾ ಫ್ಯಾಮಿಲಿ ಮ್ಯಾನ್. ಚಿತ್ರಗಳೂ ಕೂಡ ಹಾಗೇ ಇರುತ್ತವೆ. ಅವರ ಅಭಿಮಾನಿಗಳು ಬಯಸೋದು ಅದನ್ನೇ. ಈ ವರ್ಷದಲ್ಲೇ ತೆರೆ ಕಂಡಿದ್ದ ರಾಜಕುಮಾರ ಚಿತ್ರ ಅಪ್ಪು ಬದುಕಿನ ದಿಕ್ಕನ್ನೇ ಬದಲಾಯಿಸಿದೆ ಎಂದು ಹೇಳಿದರೆ ಆಶ್ಚರ್ಯವಿಲ್ಲ. ಹಾಗೆ ನೋಡೋದಾದರೆ ಕಮರ್ಷಿಯಲ್ ಚಿತ್ರಗಳ ಭರಾಟೆಯಲ್ಲಿ ಮಾಸ್ ಮೇನಿಯಾದಲ್ಲಿ ಕೌಟುಂಬಿಕ ಚಿತ್ರ ಕೈ ಹಿಡಿಯುತ್ತೆ ಎಂದರೆ ಅದು ದೊಡ್ಡ ಸಾಧನೆಯೇ ಸರಿ. ರಾಜಕುಮಾರ ಚಿತ್ರದ ಯಶಸ್ಸು ಚಿತ್ರರಂಗದಲ್ಲಿ ಸರ್ವರ ಯಶಸ್ಸು. ಅಲ್ಲಿಂದ ಅಪ್ಪು ಹಿಡಿದದ್ದು ಹೊಸ ಶ್ರೇಯಸ್ಸು.ಪುನೀತ್ ದೇಹದ ಲುಕ್ ಬದಲಾಗಿರೋದಕ್ಕೂ ರಾಜಕುಮಾರ ಚಿತ್ರಕ್ಕೂ ಅದೇನು ಸಂಬಂಧ ಎನ್ನುವ ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲೇ ಇದೆ. ಹಿಂದೆಲ್ಲಾ ಒಂದು ಚಿತ್ರ ಮುಗಿಯೋ ಹೊತ್ತಿಗೆ ಅಪ್ಪು ಮುಂದಿನ ಚಿತ್ರದ ಮುಹೂರ್ತ ಆಗೇಬಿಡುತ್ತಿತ್ತು, ಇಲ್ಲವೇ ಅನೌನ್ಸ್ ಆಗ್ತಿತ್ತು. ಆದರೆ ಇನ್ನೇನು ಕೆಲವು ವಾರಗಳಲ್ಲೇ ಅಂಜನಿಪುತ್ರ ತೆರೆಗೆ ಬಂದು ಬಿಡುತ್ತೆ. ಅಂಜನಿಪುತ್ರ ಕೂಡ ಪಕ್ಕಾ ಫ್ಯಾಮಿಲಿ ಎಂಟರ್‍ ಟೈನರ್ ಅನ್ನೋದು ಟ್ರೇಲರ್ ನೋಡಿದರೆ ಗೊತ್ತಾಗೋ ವಿಷ್ಯ. ಆದರೆ ಅದ್ಯಾಕೋ ಅಪ್ಪು ಮುಂದಿನ ಪ್ರಾಜೆಕ್ಟ್ ಅನೌನ್ಸ್ ಆಗಿಲ್ಲ. ಹಾಗ್ ನೋಡೋದಾದರೆ ಅಪ್ಪು ಸಿಕ್ಕಾಪಟ್ಟೆ ಬ್ಯುಸಿ.

smiling face puneeth rajkumar always giving us a best commercial family entertainment movie, puneeth rajkumar getting weight loss and six pack do you know the reason.watch this video

Videos similaires